atomic theory
ನಾಮವಾಚಕ

ಪರಮಾಣುವಾದ; ಪರಮಾಣು ಸಿದ್ಧಾಂತ.

  1. (ತತ್ತ್ವಶಾಸ್ತ್ರ) ವಸ್ತು ಅವಿಚ್ಛಿನ್ನವಲ್ಲ, ಪರಮಾಣುಗಳೆಂಬ ಅಭೇದ್ಯವಾದ ಕಣಗಳಿಂದ ರೂಪಿತವಾಗಿದೆ ಎಂಬ ಸಿದ್ಧಾಂತ.
  2. (ಭೌತವಿಜ್ಞಾನ, ರಸಾಯನವಿಜ್ಞಾನ) ಒಂದೊಂದು ರಾಸಾಯನಿಕ ಧಾತುವೂ ಅದಕ್ಕೆ ವಿಶಿಷ್ಟವಾದ ಪರಮಾಣುಗಳೆಂಬ ಕಣಗಳಿಂದ ರೂಪಿತವಾದುದು, ಬೇರೆ ಬೇರೆ ಧಾತುವಿನ ಪರಮಾಣುಗಳು ಪರಸ್ಪರ ಭಿನ್ನವಾದವು, ಪರಮಾಣುಗಳು ನಿರ್ದಿಷ್ಟ ಸಂಖ್ಯೆಗಳಲ್ಲಿ ಪರಸ್ಪರ ಸೇರಿಕೊಂಡು ಅಣುಗಳನ್ನು ರೂಪಿಸುತ್ತವೆ ಎಂಬ ಸಿದ್ಧಾಂತ.